ಹ್ಯಾಶ್‌ಟ್ಯಾಗ್‌ಗಳು: ನಿಮ್ಮ ಪೋಸ್ಟ್‌ಗಳಿಗೆ ಟ್ಯಾಗ್ ಸೇರಿಸಿ ಮತ್ತು ಇನ್ನಷ್ಟು ಅನ್ವೇಷಿಸಿ
ಕೊನೆಯದಾಗಿ ನವೀಕರಿಸಿದ ದಿನಾಂಕ:
ಹ್ಯಾಶ್‌ಟ್ಯಾಗ್ ಒಂದು ಸಾರ್ವಜನಿಕ ಪೋಸ್ಟ್ ಅನ್ನು ವಿಷಯ, ಶೈಲಿ ಅಥವಾ ಸರಣಿಯೊಂದಿಗೆ ಸಂಪರ್ಕಿಸುತ್ತದೆ. ಪ್ರತಿಯೊಂದು ಟ್ಯಾಗ್‌ಗೂ ತನ್ನದೇ ಆದ ಪುಟವಿದೆ: #ootd ಅಥವಾ #fashion ತೆರೆಯಿರಿ; ಆ ಪರಿಕಲ್ಪನೆಗೆ ಸಂಬಂಧಿಸಿ ಸಮುದಾಯವು ಪ್ರಕಟಿಸಿರುವ ಎಲ್ಲವನ್ನೂ ನೀವು ನೋಡಬಹುದು. ನಿಮ್ಮದನ್ನೂ ಸೇರಿಸಲು ಪೋಸ್ಟ್ ಮಾಡಿ ಬಟನ್ ಇರುತ್ತದೆ.

ನೀವು ಪೋಸ್ಟ್ ಮಾಡುವಾಗ ಟ್ಯಾಗ್‌ಗಳನ್ನು ಸೇರಿಸಿ
- ಪ್ರಾಜೆಕ್ಟ್‌ನಲ್ಲಿ ಪ್ರಕಟಿಸಿ ಆಯ್ಕೆಮಾಡಿ ಅಥವಾ ಮುಖಪುಟದಿಂದ ಪೋಸ್ಟ್ ರಚಿಸಲು ಪ್ರಾರಂಭಿಸಿ.
- ಶೀರ್ಷಿಕೆ ಬರೆಯಿರಿ ಮತ್ತು # ನಂತರ ಟ್ಯಾಗ್ ಟೈಪ್ ಮಾಡಿ. ನೀವು ಟೈಪ್ ಮಾಡಿದಂತೆ ಸಲಹೆಗಳು ಕಾಣಿಸಿಕೊಳ್ಳುತ್ತವೆ; ಒಂದನ್ನು ಆಯ್ಕೆಮಾಡಿ ಅಥವಾ ನಿಮ್ಮದೇ ಟ್ಯಾಗ್ ಅನ್ನು ಪೂರ್ಣಗೊಳಿಸಿ. ಶೀರ್ಷಿಕೆಯ ಕೆಳಗಿರುವ # ಬಟನ್ ನಿಮಗಾಗಿ # ಸೇರಿಸುತ್ತದೆ.
- ಪೋಸ್ಟ್ ಮಾಡಿ ಆಯ್ಕೆಮಾಡಿ.

ಟ್ಯಾಗ್‌ಗಳು ಸೇರಿದಂತೆ ಶೀರ್ಷಿಕೆಯಲ್ಲಿ ಗರಿಷ್ಠ 500 ಅಕ್ಷರಗಳನ್ನು ಸೇರಿಸಬಹುದು. ಪೋಸ್ಟ್ ಮಾಡುವ ಪ್ರಕ್ರಿಯೆಯ ಉಳಿದ ಹಂತಗಳಿಗಾಗಿ ಪೋಸ್ಟ್ ಅನ್ನು ಪ್ರಕಟಿಸಿ, ಎಡಿಟ್ ಮಾಡಿ ಮತ್ತು ಅಳಿಸಿ ನೋಡಿ.
ಟ್ಯಾಗ್ ಅನ್ನು ಅನ್ವೇಷಿಸಿ
ಪ್ರವೇಶಿಸಲು ಮೂರು ಮಾರ್ಗಗಳು:
- ಡೆಸ್ಕ್‌ಟಾಪ್‌ನಲ್ಲಿ ಅನ್ವೇಷಣೆ ಅಥವಾ ಮೊಬೈಲ್ ವೆಬ್‌ನಲ್ಲಿ ಅನ್ವೇಷಿಸಿ ಜನಪ್ರಿಯ ಟ್ಯಾಗ್‌ಗಳನ್ನು ಪಟ್ಟಿ ಮಾಡುತ್ತದೆ; ಪ್ರತಿಯೊಂದರೊಂದಿಗೆ ಇತ್ತೀಚಿನ ಪೋಸ್ಟ್‌ಗಳ ಒಂದು ಸಾಲು ಇರುತ್ತದೆ. ಅದರ ಪುಟವನ್ನು ತೆರೆಯಲು ಟ್ಯಾಗ್ ಹೆಸರನ್ನು ಆಯ್ಕೆಮಾಡಿ.
- ಪೋಸ್ಟ್ ಶೀರ್ಷಿಕೆಯಲ್ಲಿನ ಯಾವುದೇ ಹ್ಯಾಶ್‌ಟ್ಯಾಗ್ ಅನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ. ಟ್ಯಾಗ್‌ಗಳು ಸುಲಭವಾಗಿ ಕಾಣಿಸುವಂತೆ ಹೈಲೈಟ್ ಮಾಡಲಾಗಿರುತ್ತದೆ.
- ಅನ್ವೇಷಣೆಯಲ್ಲಿ ಒಂದು ಪದವನ್ನು ಹುಡುಕಿ ಮತ್ತು ಫಲಿತಾಂಶಗಳಲ್ಲಿನ ಹ್ಯಾಶ್‌ಟ್ಯಾಗ್ ಟ್ಯಾಬ್ ತೆರೆಯಿರಿ.
ಟ್ಯಾಗ್ ಪುಟದಲ್ಲಿ ಇವು ಇರುತ್ತವೆ:
- ಟ್ಯಾಗ್ ಹೆಸರು ಮತ್ತು ಪುಟದ ಲಿಂಕ್ ಅನ್ನು ನಕಲಿಸುವ ಹಂಚಿಕೊಳ್ಳಿ ಬಟನ್ ಇರುವ ಶೀರ್ಷಿಕೆ ಭಾಗ.
- ಆ ಟ್ಯಾಗ್ ಬಳಸುವ ಪ್ರತಿಯೊಂದು ಸಾರ್ವಜನಿಕ ಪೋಸ್ಟ್. ಎಂದಿನಂತೆ ಇಲ್ಲಿಂದಲೇ ಅನುಸರಿಸಿ, ಮೆಚ್ಚುಗೆ ಸೂಚಿಸಿ ಮತ್ತು ಕಾಮೆಂಟ್ ಮಾಡಿ.
- ಶೀರ್ಷಿಕೆಯಲ್ಲಿ ಈಗಾಗಲೇ ಆ ಟ್ಯಾಗ್ ಇರುವ ಹೊಸ ಪೋಸ್ಟ್ ಅನ್ನು ಪ್ರಾರಂಭಿಸುವ ಪೋಸ್ಟ್ ಮಾಡಿ ಬಟನ್.
ಟ್ಯಾಗ್‌ಗಳ ಜಾಡು ಹಿಡಿಯಿರಿ: #fashion ತೆರೆಯಿರಿ, ಶೀರ್ಷಿಕೆಯಲ್ಲಿ #ootd ಅಥವಾ #streetstyle ಕಂಡುಕೊಳ್ಳಿ ಮತ್ತು ಅನ್ವೇಷಿಸುತ್ತಾ ಮುಂದುವರಿಯಿರಿ.
ಹ್ಯಾಶ್‌ಟ್ಯಾಗ್ ಪುಟವು ಇತರರು ಪ್ರಕಟಿಸಿದ ಕೃತಿಗಳನ್ನು ತೋರಿಸುತ್ತದೆ. ನಿಮ್ಮ ಸ್ವಂತ ಪ್ರಾಜೆಕ್ಟ್‌ಗಳು ಎಡಿಟರ್ → ಪ್ರಾಜೆಕ್ಟ್ನಲ್ಲೇ ಇರುತ್ತವೆ ಮತ್ತು ನೀವು ಅವುಗಳನ್ನು ಪ್ರಕಟಿಸದ ಹೊರತು ಅಲ್ಲಿ ಎಂದಿಗೂ ಪಟ್ಟಿ ಮಾಡಲಾಗುವುದಿಲ್ಲ.
ಉಪಯುಕ್ತ ಟ್ಯಾಗ್‌ಗಳನ್ನು ಆಯ್ಕೆಮಾಡಿ
- ವಿಷಯ, ಶೈಲಿ ಅಥವಾ ಭಾವವನ್ನು ವಿವರಿಸಿ: #productshot, #filmlook, #streetwear.
- ಜನರು ಸರಣಿಯನ್ನು ಅನುಸರಿಸಲು ಸಾಧ್ಯವಾಗುವಂತೆ ಅದಕ್ಕೆ ಒಂದು ವೈಯಕ್ತಿಕ ಟ್ಯಾಗ್ ಬಳಸಿ.
- ನೀವು ಯಾವುದಾದರೂ ಚಟುವಟಿಕೆ ಅಥವಾ ಸಮುದಾಯದಲ್ಲಿ ಭಾಗವಹಿಸುವಾಗ ಅದರ ಟ್ಯಾಗ್ ಸೇರಿಸಿ.
- ಹತ್ತು ಜನಪ್ರಿಯ ಟ್ಯಾಗ್‌ಗಳಿಗಿಂತ ಮೂರು ಸಂಬಂಧಿತ ಟ್ಯಾಗ್‌ಗಳು ಉತ್ತಮ. ಟ್ಯಾಗ್‌ಗಳು ವ್ಯಾಪ್ತಿ ಅಥವಾ ಬಹುಮಾನಗಳ ಭರವಸೆ ನೀಡುವುದಿಲ್ಲ.
ಸಾರ್ವಜನಿಕವಾಗಿ ಹಂಚಿಕೊಳ್ಳುವುದು
ಹ್ಯಾಶ್‌ಟ್ಯಾಗ್‌ಗಳು ಪ್ರಕಟಿಸಿದ ಪೋಸ್ಟ್‌ಗಳಲ್ಲಿ ಮಾತ್ರ ಇರುತ್ತವೆ ಮತ್ತು ಪ್ರಕಟಿಸಿದ ಪೋಸ್ಟ್ ನಿಮ್ಮ ಪ್ರೊಫೈಲ್ ಹೆಸರು ಹಾಗೂ ಫೋಟೋದೊಂದಿಗೆ ಸಾರ್ವಜನಿಕವಾಗಿರುತ್ತದೆ. ಪೋಸ್ಟ್ ಮಾಡುವ ಮೊದಲು ಶೀರ್ಷಿಕೆ ಮತ್ತು ಮಾಧ್ಯಮವನ್ನು ಪರಿಶೀಲಿಸಿ. ಗೌಪ್ಯತಾ ನೀತಿ ಸಾರ್ವಜನಿಕ ವಿಷಯವನ್ನು ಒಳಗೊಂಡಿದೆ.